‘Utthana Dwadashi’ Celebration in RVK – Sattur

Dharwad, Nov. 13: ‘Tulsi Vivaha’ was celebrated herein Rashtrotthana Vidya Kendra – Sattur. Teacher Sri Ravindra performed Tulsi Puja. Teacher Smt. Rashmi Kulkarni said, “This festival is the celebration of the wedding of Vishnu and Tulsi. This festival is celebrated on the 12th day of the Shukla Paksha of the lunar month of Kartikamasa, i.e. on Dwadashi. Tulsi sapling is not only limited to devotion, worship and rituals, it has many medicinal properties and is a panacea for many diseases” thus explained in detail the importance of the Tulsi Wedding Celebration and its diverse uses. A group of school teachers sang a song about Tulsi. At the end, prasada was distributed.

ಧಾರವಾಡ, ನ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ತುಳಸಿವಿವಾಹವನ್ನು ಆಚರಿಸಲಾಯಿತು. ಶಿಕ್ಷಕ ಶ್ರೀ ರವೀಂದ್ರ ಅವರು ತುಳಸಿ ಪೂಜೆಯನ್ನು ನೆರವೇರಿಸಿದರು. ಶಿಕ್ಷಕಿ ಶ್ರೀಮತಿ ರಶ್ಮಿ ಕುಲಕರ್ಣಿ ಅವರು “ಈ ಹಬ್ಬವು ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಾಗಿದ್ದು, ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ತುಳಸಿ ಸಸಿಯು ಕೇವಲ ಭಕ್ತಿ, ಪೂಜೆ, ಆಚರಣೆಗೆ ಮಾತ್ರ ಸೀಮಿತವಾಗದೆ, ಇದು ಹಲವು ಔಷಧೀಯ ಗುಣವನ್ನು ಹೊಂದಿದ್ದು ಅನೇಕ ರೋಗಗಳಿಗೆ ರಾಮಬಾಣವಾಗಿದೆ” ಎಂದು ತುಳಸಿ ವಿವಾಹದ ಆಚರಣೆಯ ಮಹತ್ತ್ವ ಹಾಗೂ ಅದರ ವೈವಿಧ್ಯಮಯ ಉಪಯೋಗದ ಕುರಿತು ವಿವರವಾಗಿ ತಿಳಿಸಿಕೊಟ್ಟರು. ತುಳಸಿ ಕುರಿತು ಶಾಲಾ ಶಿಕ್ಷಕಿಯರ ಸಮೂಹ ಗಾಯನ ಹಾಡಿದರು. ಕೊನೆಯಲ್ಲಿ ಪ್ರಸಾದವನ್ನು ವಿತರಿಸಲಾಯಿತು.

Scroll to Top