Dharwad, Sept 5: “The conduct of educators significantly influences the future of children. They acquire knowledge more from our actions than from our words”. said Head of Swami Vivekananda Youth Movement, Sri Jayant K. S. opined. He was speaking on the occasion of Teacher’s Day at Rashtrotthana Vidya Kendra – Sattur.Teacher’s Day was celebrated in a unique manner herein Rashtrotthana Vidya Kendra – Sattur.The program featured a variety of performances, including dance, comedic drama, and songs cantered around teachers, all presented by children. It also included a segment of children’s comedic question-and-answer sessions and speeches, culminating in a humorous and engaging performance.The afternoon featured Sri Jayant K., the Head of the Swami Vivekananda Youth Movement, as the distinguished guest. He had arrived and took the opportunity to share his insightful experiences regarding children’s education, while also expressing his admiration for the significance and nobility of the teaching profession.In the program books were distributed to the teachers with respect notice. Many entertaining games and quiz programs were organised.”A teacher should be a good role model for children and possess good qualities” – Correspondent Sri Gururaj Agadi.
ಧಾರವಾಡ, ಸಪ್ಟೆಂಬರ್ 5: “ಶಿಕ್ಷಕರ ನಡವಳಿಕೆ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ. ನಾವು ಏನು ಹೇಳುತ್ತೇವೆ ಎಂಬುದಕ್ಕಿಂತ, ನಾವು ಏನು ಮಾಡುತ್ತೇವೆ ಎಂಬುದನ್ನು ಅವರು ನೋಡಿ ಕಲಿಯುತ್ತಾರೆ” ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಹೆಡ್, ಶ್ರೀ ಜಯಂತ್ ಕೆ. ಎಸ್. ಅವರು ಅಭಿಪ್ರಾಯಪಟ್ಟರು. ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು.ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಮಕ್ಕಳಿಂದ ನಿರ್ಮಿಸಲಾದ ನೃತ್ಯ, ಹಾಸ್ಯ ನಾಟಕ, ಮತ್ತು ಶಿಕ್ಷಕರ ಕುರಿತಾದ ಹಾಡುಗಳು, ಮಕ್ಕಳ ಹಾಸ್ಯ ಪ್ರಶ್ನೆ-ಉತ್ತರ ಮತ್ತು ಭಾಷಣಗಳು, ಕಾರ್ಯಕ್ರಮವು ಹಾಸ್ಯಮಯ ಮತ್ತು ಮನರಂಜನೆಯೊಂದಿಗೆ ಮುಕ್ತಾಯಗೊಂಡಿತು. ಮಧ್ಯಾಹ್ನದ ಅವಧಿಯಲ್ಲಿ ವಿಶೇಷ ಅತಿಥಿಯಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಹೆಡ್, ಶ್ರೀ ಜಯಂತ್ ಕೆ. ಎಸ್. ರವರು ಆಗಮಿಸಿದ್ದರು. ಅವರು ಮಕ್ಕಳ ಶಿಕ್ಷಣದ ಕುರಿತು ತಮ್ಮ ಅಮೂಲ್ಯವಾದ ಅನುಭವಗಳನ್ನು ಹಂಚಿಕೊಂಡು, ಶಿಕ್ಷಕ ವೃತ್ತಿಯ ಶ್ರೇಷ್ಠತೆ ಮತ್ತು ಪವಿತ್ರತೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಗೌರವ ಸೂಚನೆಯೊಂದಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಅನೇಕ ಮನರಂಜನೀಯ ಆಟಗಳು ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. “ಶಿಕ್ಷಕನಾದವನು ಮಕ್ಕಳಿಗೆ ಉತ್ತಮ ಮಾದರಿಯಾಗಿರಬೇಕು ಮತ್ತು ಉತ್ತಮ ಗುಣಗಳನ್ನು ಹೊಂದಿರಬೇಕು” – ಕರೆಸ್ಪಾಂಡೆಂಟ್ ಶ್ರೀ ಗುರುರಾಜ್ ಅಗಡಿ.