“Students should know the procedure of election process at school level itself. This will make children realize the importance of union and inspire them to be good manners and good citizens” – Smt. Neelamma Ariwalar. Dharwad, July 23: The oath taking ceremony of the student union for the academic year 2024-25 was held herein Rashtrotthana Vidya Kendra – Sattur.Kum. Shivaleela Kuravatti, Principal of the school, preached the oath of office after distributing the badges to all the elected leaders. All the children stood in a series and recited the pledge under the guidance of their teacher.Sri Sangamesh Dindiginal, Divisional Police Inspector, Vidyagiri, and Smt. Neelamma Ariwalar, City Corporator, were the chief guests for the event.Sri Gururaj Agadi, the correspondent of Sattur and all the teaching staff and children were present in the program.“We should not only be confined to our home but be a good citizen of the whole world” – Shri Sangamesh Dindiginal
“ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಚುನಾವಣೆ ಪ್ರಕ್ರಿಯೆ ನಡೆಯುವ ಕ್ರಮವನ್ನು ತಿಳಿದಿರಬೇಕು. ಇದರಿಂದ ಮಕ್ಕಳು ಒಕ್ಕೂಟದ ಪ್ರಾಮುಖ್ಯತೆಯನ್ನು ಅರಿತು ಅವರಲ್ಲಿ ಉತ್ತಮ ಶಿಷ್ಟಾಚಾರ ಮತ್ತು ಉತ್ತಮ ನಾಗರಿಕರು ಆಗಲು ಪ್ರೇರಣೆ ನೀಡುತ್ತದೆ” – ಶ್ರೀಮತಿ ನೀಲಮ್ಮ ಅರಿವಾಲರ್. ಧಾರವಾಡ, ಜುಲೈ 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಸತ್ತೂರಿನಲ್ಲಿ 2024-25ರ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಪ್ರಧಾನ ಆಚಾರ್ಯರಾದ ಕುಮಾರಿ ಶಿವಲೀಲಾ ಕುರವತ್ತಿ ಅವರು ಎಲ್ಲ ಚುನಾಯಿತ ನಾಯಕರಿಗೆ ಬ್ಯಾಡ್ಜ್ ವಿತರಿಸಿದ ನಂತರ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಮಕ್ಕಳೆಲ್ಲರೂ ಸರಣಿಯಲ್ಲಿ ನಿಂತು ಗುರುಗಳ ಮಾರ್ಗದರ್ಶನದಲ್ಲಿ ಪ್ರತಿಜ್ಞೆಯನ್ನು ಪಠಿಸಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಂತಹ ನಗರದ ಪೊಲೀಸ್ ಅಧಿಕಾರಿಯಾದ ಶ್ರೀ ಸಂಗಮೇಶ್ ಡಿಂಡಿಜಿನಲ್, ಪೊಲೀಸ್ ಇನ್ಸ್ಪೆಕ್ಟರ್, ವಿದ್ಯಾಗಿರಿ ಹಾಗೂ ಶ್ರೀಮತಿ ನೀಲಮ್ಮ ಅರಿವಾಲರ್, ನಗರದ ಕಾರ್ಪೊರೇಟರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸತ್ತೂರಿನ ಕರೆಸ್ಪಾಂಡೆಂಟ್ ಆದ ಶ್ರೀ ಗುರುರಾಜ್ ಅಗಡಿಯವರು ಮತ್ತು ಎಲ್ಲ ಶಿಕ್ಷಕ ವೃಂದ ಮತ್ತು ಮಕ್ಕಳು ಹಾಜರಿದ್ದರು. ನಾವು ನಮ್ಮ ಮನೆಗೆ ಮಾತ್ರ ಸೀಮಿತವಾಗಿರದೆ ಇಡೀ ಜಗತ್ತಿಗೆ ಉತ್ತಮ ನಾಗರಿಕನಾಗಬೇಕು – ಶ್ರೀ ಸಂಗಮೇಶ್ ಡಿಂಡಿಜಿನಲ್