Karnataka Rajyotsva Celebration in RVK – Sattur

Dharwad, Nov. 6: Karnataka Rajyotsava was celebrated herein Rashtrotthana Vidya Kendra – Sattur. Kannada teachers of High School Kadrolli, literary Dr. Gajananda Sogalannavar graced the program. The flag was hoisted.Students sang a song about land, water, culture and literature of Kannada and Karnataka. A dance on Akkamahadevi vachana, the first vachangarti of Kannada, and a dance on Nityotsava Kavan were performed. The play on the regional Kannada language presented the linguistic diversity there with comedy.The chief guest of the program spoke about the need and importance of Kannada Language. Chalukya Kesari Immadi Pulakeshi’s aspirant implied that by incorporating the political acumen, vision and patriotism of the current Prime Minister to become the future Prime Minister of modern India, the fame of Karnataka’s Kannada should be spread throughout the country.

ಧಾರವಾಡ, ನ. 6: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಸತ್ತೂರಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೌಢಶಾಲೆ ಕದ್ರೊಳ್ಳಿಯ ಕನ್ನಡ ಅಧ್ಯಾಪಕರು, ಸಾಹಿತಿಗಳು ಆದ ಡಾ. ಗಜಾನಂದ ಸೊಗಲನ್ನವರ್ ಆಗಮಿಸಿದ್ದರು. ಧ್ವಜಾರೋಹಣ ಮಾಡಲಾಯಿತು. ವಿದ್ಯಾರ್ಥಿಗಳು ಕನ್ನಡ ಹಾಗೂ ಕರ್ನಾಟಕದ ನೆಲ, ಜಲ, ಸಂಸ್ಕೃತಿ, ಸಾಹಿತ್ಯದ ಕುರಿತಾದ ಹಾಡನ್ನು ಹಾಡಿದರು. ಕನ್ನಡದ ಮೊದಲ ವಚನಗಾರ್ತಿ ಅಕ್ಕಮಹಾದೇವಿ ವಚನದ ಕುರಿತಾದ ನೃತ್ಯವನ್ನು ಹಾಗೂ ನಿತ್ಯೋತ್ಸವ ಕವನದ ನೃತ್ಯವನ್ನು ಪ್ರದರ್ಶಿಸಲಾಯಿತು. ಪ್ರಾದೇಶಿಕ ಕನ್ನಡ ಭಾಷೆಯ ಕುರಿತಾದ ನಾಟಕವು ಹಾಸ್ಯದೊಂದಿಗೆ ಅಲ್ಲಿನ ಭಾಷಾ ವೈವಿಧ್ಯತೆಯನ್ನು ಪ್ರಸ್ತುತಪಡಿಸಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳು ಕನ್ನಡ ಭಾಷೆಯ ಅವಶ್ಯಕತೆ ಮತ್ತು ಮಹತ್ತ್ವದ ಕುರಿತು ತಿಳಿಸಿದರು. ಚಾಲುಕ್ಯರ ಕೇಸರಿ ಇಮ್ಮಡಿ ಪುಲಕೇಶಿಯ ಮಹತ್ತ್ವಾಕಾಂಕ್ಷಿ, ಪ್ರಸ್ತುತ ಪ್ರಧಾನಿಯವರ ರಾಜಕೀಯ ಚಾಣಾಕ್ಷತೆ, ದೂರ ದೃಷ್ಟಿ,ರಾಷ್ಟ್ರಪ್ರೇಮ ಎಲ್ಲವನ್ನು ಮೈಗೂಡಿಸಿಕೊಂಡು ಆಧುನಿಕ ಭಾರತದ ಭಾವಿ ಪ್ರಧಾನಮಂತ್ರಿಯಾಗುವ ಮೂಲಕ ಕರ್ನಾಟಕದ ಕನ್ನಡದ ಕೀರ್ತಿಯನ್ನು ದೇಶದ ಉದ್ದಗಲಕ್ಕೂ ಹರಡಬೇಕೆಂದು ಸೂಚ್ಯವಾಗಿ ತಿಳಿಸಿದರು.

Scroll to Top