Dharwad, Dec. 27: A Chinnar Santhe program was organized herein Rashtrotthana Vidya Kendra – Sattur.The children themselves became traders and sold vegetables, fruits, stationery, jute bags, packed food, juices and other items and gained practical experience of buying and selling. The guests of the program, Sri Kumaraswamy Kulkarni and Smt. Veda Purohit, wished and encouraged the children’s creativity. Correspondent Sri Gururaj Agadi, Pradhanacharya Sri Ramakrishna, teachers, parents and villagers participated in large numbers and encouraged the children.

ಧಾರವಾಡ, ಡಿ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಚಿಣ್ಣರ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಕ್ಕಳು ತಾವೇ ವ್ಯಾಪಾರಿಗಳಾಗಿ ತರಕಾರಿ, ಹಣ್ಣು, ಸ್ಟೇಷನರಿ, ಜ್ಯೂಟ್ ಬ್ಯಾಗ್, ಪ್ಯಾಕ್ಡ್ ಫುಡ್, ಜ್ಯೂಸ್ ಮುಂತಾದ ವಸ್ತುಗಳನ್ನು ಮಾರಾಟ ಮಾಡಿ ಖರೀದಿ–ಮಾರಾಟದ ಪ್ರಾಯೋಗಿಕ ಅನುಭವ ಪಡೆದರು. ಕಾರ್ಯಕ್ರಮದ ಅತಿಥಿಗಳಾದ ಶ್ರೀ ಕುಮಾರಸ್ವಾಮಿ ಕುಲಕರ್ಣಿ ಹಾಗೂ ಶ್ರೀಮತಿ ವೇದಾ ಪುರೋಹಿತ್ ಅವರು ಮಕ್ಕಳ ಸೃಜನಶೀಲತೆಯನ್ನು ಹಾರೈಸಿ ಪ್ರೋತ್ಸಾಹಿಸಿದರು. ಕರೆಸ್ಪಾಂಡೆಂಟ್ ಶ್ರೀ ಗುರುರಾಜ್ ಅಗಡಿ, ಪ್ರಧಾನಾಚಾರ್ಯ ಶ್ರೀ ರಾಮಕೃಷ್ಣ, ಶಿಕ್ಷಕರು, ಪಾಲಕರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳಿಗೆ ಉತ್ತೇಜನ ನೀಡಿದರು.