Doctor’s Day in RVK – Sattur

“A good doctor’s comforting and reassuring words are sometimes more powerful than the medicines.”Dharwad, July 1: Doctor’s Day was celebrated in a unique manner herein Rashtrotthana Vidya Kendra – Sattur.A doctor from a hospital near the school was called and an interaction was arranged with the children.In the conversation, the doctor explained how to take precautions to avoid diseases. They guided the children who want to become doctors on how to prepare. Doctors shared their professional experiences. Children cleared their doubts through questions. Greeting cards were sent to the parents by the doctor’s children in the school. Medical professionals were acknowledged with a special presentation.

ಧಾರವಾಡ, ಜುಲೈ 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ವೈದ್ಯರ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಶಾಲೆಯ ಸಮೀಪದಲ್ಲಿರುವ ಆಸ್ಪತ್ರೆಯ ವೈದ್ಯರನ್ನು ಕರೆದು ಮಕ್ಕಳೊಂದಿಗೆ ಸಂವಾದವನ್ನು ಏರ್ಪಡಿಸಲಾಗಿತ್ತು.ಸಂವಾದದಲ್ಲಿ ರೋಗಗಳು ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ ಎನ್ನುವುದನ್ನು ವೈದ್ಯರು ತಿಳಿಸಿದರು. ಮುಂದೆ ವೈದ್ಯರಾಗಬೇಕೆನ್ನುವ ಮಕ್ಕಳು ಹೇಗೆ ತಯಾರಿ ನಡೆಸಬೇಕು ಎನ್ನುವ ಮಾರ್ಗದರ್ಶನ ಮಾಡಿದರು. ತಮ್ಮ ವೃತ್ತಿಯ ಅನುಭವಗಳನ್ನು ವೈದ್ಯರು ಹಂಚಿಕೊಂಡರು. ಮಕ್ಕಳು ತಮಗೆ ಇದ್ದ ಸಂಶಯಗಳನ್ನು ಪ್ರಶ್ನೆಗಳ ಮೂಲಕ ನಿವಾರಿಸಿಕೊಂಡರು. ಶಾಲೆಯಲ್ಲಿರುವ ವೈದ್ಯರ ಮಕ್ಕಳ ಮೂಲಕ ಪಾಲಕರಿಗೆ ಶುಭಾಶಯ ಪತ್ರಗಳನ್ನು ಕಳುಹಿಸಲಾಯಿತು.ವೈದ್ಯರಿಗೆ ಕಿರುಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.

Scroll to Top