2025-26 Registration Process Commencement Ceremony in RVK – Sattur

Dharwad, October 12: “This institution treats education as a sacred service, imparting good rites to the youth and moulding them into ideal members of the society. Rashtrotthana Vidya Kendra, like a temple, makes Indian values a part of our lives” Sri V. S. V. Prasad Chigurupathi opined. He was speaking in the opening ceremony of the registration process for the year 2025-26 held herein Rashtrotthana Vidya Kendra – Sattur. The registration process initiation ceremony for the year 2025-26 was held herein Rashtrotthana Vidya Kendra – Sattur. On this occasion, Sri V. S. V. Prasad Chigurupathi and Honourable MLA of Hubli-Dharwad Constituency Sri Mahesh Tenginakai were present as chief guest. Sri V. S. V. Prasad Chigurupathi appreciated that Rashtrotthana Vidya Kendra is continuously doing great work to impart cultured education and develop good personality to the students. Sri Mahesh Tenginakai speaking said, “Rashtrotthana Vidya Kendra as its name is striving for the upliftment of the country, the students educated here will become the bright leaders of tomorrow. If the students get good education along with culture, it will play a big role in their personality development.” The registration form for the program was officially released, and renowned businessman and doctorate graduate Sri V. S. V. Prasad Chigurupathi was honoured. Former member of the governing body, Sri Ashok Sonkar, explained the importance of value education awareness and inculcation of human values in children from an early age. Correspondent of the school Sri Gururaj Agadi, by saying the introductory words of the ceremony, gave information about the history, achievements and educational objectives of the institution.

ಧಾರವಾಡ, ಅಕ್ಟೋಬರ್ 12: “ಈ ಸಂಸ್ಥೆಯು ಶಿಕ್ಷಣವನ್ನು ಪವಿತ್ರ ಸೇವೆಯಾಗಿ ಪರಿಗಣಿಸಿ, ಯುವಕರಿಗೆ ಉತ್ತಮ ಸಂಸ್ಕಾರಗಳನ್ನು ನೀಡುತ್ತಾ, ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನು ರೂಪಿಸುತ್ತಿದೆ. ರಾಷ್ಟ್ರೋತ್ಥಾನ ವಿದ್ಯಾಲಯವು ದೇವಾಲಯದಂತೆ ಭಾರತೀಯ ಮೌಲ್ಯಗಳನ್ನೂ ನಮ್ಮ ಜೀವನದ ಭಾಗವಾಗಿಸುತ್ತದೆ” ಎಂದು ಶ್ರೀ ವಿ. ಎಸ್. ವಿ. ಪ್ರಸಾದ್ ಚಿಗುರುಪತಿ ಅವರು ಅಭಿಪ್ರಾಯ ಪಟ್ಟರು. ಅವರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ನಡೆದ 2025-26ನೇ ಸಾಲಿನ ನೊಂದಣಿ ಪ್ರಕ್ರಿಯೆ ಪ್ರಾರಂಭ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ 2025-26ನೇ ಸಾಲಿನ ನೊಂದಣಿ ಪ್ರಕ್ರಿಯೆ ಪ್ರಾರಂಭ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ವಿ. ಎಸ್. ವಿ. ಪ್ರಸಾದ್ ಚಿಗುರುಪತಿ ಮತ್ತು ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಮಹೇಶ್ ಟೆಂಗಿನಕಾಯಿ ಅವರು ಉಪಸ್ಥಿತರಿದ್ದರು. ಶ್ರೀ ವಿ. ಎಸ್. ವಿ. ಪ್ರಸಾದ್ ಚಿಗುರುಪತಿ ಅವರು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಮತ್ತು ಉತ್ತಮ ವ್ಯಕ್ತಿತ್ವ ಬೆಳೆಸಲು ರಾಷ್ಟ್ರೋತ್ಥಾನ ವಿದ್ಯಾಲಯವು ನಿರಂತರವಾಗಿ ಶ್ರೇಷ್ಠ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ಮಹೇಶ್ ಟೆಂಗಿನಕಾಯಿ ಅವರು ಮಾತನಾಡುತ್ತಾ, “ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ತಮ್ಮ ಹೆಸರಿನಂತೆ ದೇಶದ ಉತ್ಥಾನಕ್ಕಾಗಿ ಶ್ರಮಿಸುತ್ತಿದ್ದು, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ನಾಳೆಯ ಭವಿಷ್ಯದ ಉಜ್ವಲ ನಾಯಕರಾಗುತ್ತಾರೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಸಿಕ್ಕರೆ, ಅದು ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ದೊಡ್ಡ ಪಾತ್ರವಹಿಸುತ್ತದೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನೊಂದಣಿ ಪತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು, ಮತ್ತು ಖ್ಯಾತ ಉದ್ಯಮಿ ಹಾಗೂ ಡಾಕ್ಟರೇಟ್ ಪದವೀಧರ ಶ್ರೀ ಎಸ್. ವಿ. ಪ್ರಸಾದ್ ಚಿಗುರುಪತಿ ಅವರನ್ನು ಗೌರವಿಸುವ ಮೂಲಕ ಸನ್ಮಾನಿಸಲಾಯಿತು. ಆಡಳಿತ ಮಂಡಳಿಯ ಮಾಜಿ ಸದಸ್ಯ, ಶ್ರೀ ಅಶೋಕ್ ಸೋಂಕರ್, ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಮೌಲ್ಯ ಶಿಕ್ಷಣದ ಜಾಗೃತಿ ಮತ್ತು ಮಾನವೀಯ ಮೌಲ್ಯಗಳ ಬೆಳೆಸುವ ಮಹತ್ತ್ವವನ್ನು ವಿವರಿಸಿದರು. ಶಾಲೆಯ ಕರೆಸ್ಪಾಂಡೆಂಟ್ ಶ್ರೀ ಗುರುರಾಜ್ ಅಗಡಿಯವರು ಸಮಾರಂಭದ ಪ್ರಾಸ್ತಾವಿಕ ನುಡಿಗಳಲ್ಲಿ ಸಂಸ್ಥೆಯ ಇತಿಹಾಸ, ಸಾಧನೆ ಹಾಗೂ ಶಿಕ್ಷಣದ ಉದ್ದೇಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.

Scroll to Top