Dharwad, Jan. 23: Veer Parakram Diwas was celebrated as part of the Jayanti of Subhas Chandra Bose herein Rashtrotthana Vidya Kendra – Sattur. As a major part of the program, Smt. Rashmi, a teacher at the school, spoke about the life of Subhas Chandra Bose and the inspiring messages he gave. In her speech, she told the children, “Subhas Chandra Bose’s famous slogan – ‘You give me blood, I give you freedom’ – played a significant role in igniting the fire of freedom struggle among the people of this country.”The program included motivational speeches by the children, patriotic songs, and recollections of important moments of Bose’s struggle.
ಧಾರವಾಡ, ಜ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿಯ ಅಂಗವಾಗಿ ವೀರ ಪರಾಕ್ರಮ ದಿವಸವನ್ನು ಆಚರಿಸಲಾಯಿತು.ಕಾರ್ಯಕ್ರಮದ ಪ್ರಮುಖ ಭಾಗವಾಗಿ ಶಾಲೆಯ ಶಿಕ್ಷಕಿಯಾದ ಶ್ರೀಮತಿ ರಶ್ಮಿ ಅವರು ಸುಭಾಷ್ ಚಂದ್ರ ಬೋಸ್ ರವರ ಜೀವನ ಮತ್ತು ಅವರು ನೀಡಿದ ಸ್ಫೂರ್ತಿದಾಯಕ ಸಂದೇಶಗಳ ಬಗ್ಗೆ ಮಾತನಾಡಿದರು. ತಮ್ಮ ಭಾಷಣದಲ್ಲಿ, “ಸುಭಾಷ್ ಚಂದ್ರ ಬೋಸ್ ರವರ ಪ್ರಸಿದ್ಧ ಘೋಷಣೆ – ‘ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ’ – ಈ ದೇಶದ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಉರಿಯನ್ನು ಹೊತ್ತಿಸುವ ಮಹತ್ವದ ಪಾತ್ರವಹಿಸಿದೆ,” ಎಂದು ಮಕ್ಕಳಿಗೆ ತಿಳಿಸಿದರು. ಮಕ್ಕಳಿಂದ ಪ್ರೇರಣಾದಾಯಕ ಭಾಷಣಗಳು, ದೇಶಭಕ್ತಿಯ ಹಾಡುಗಳು, ಬೋಸ್ ರವರ ಹೋರಾಟದ ಪ್ರಮುಖ ಘಟ್ಟಗಳ ಸ್ಮರಣೆಗಳ ಕಾರ್ಯಕ್ರಮ ಜರುಗಿತು.