Dharwad, Jan. 13: Swami Vivekananda’s Jayanti was celebrated herein Rashtrotthana Vidya Kendra – Sattur.Sri Madhusudan, the coordinator of Vande Mataram Gurukula arrived as the chief guest of the program and enlightened the children and said, “Obeying the words of mother, father and guru is the basic religion of life. Everyone should love the country and imbibe patriotism. Vivekananda’s ideals should be a beacon for our lives.”As part of the Jayanti, many cultural programs including speech, song, dance and plays were organized by the school children. Along with this, a quiz competition was held on the life and achievements of Vivekananda.
ಧಾರವಾಡ, ಜ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಸತ್ತೂರಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಂದೇ ಮಾತರಂ ಗುರುಕುಲದ ಸಂಯೋಜಕರಾದ ಶ್ರೀ ಮಧುಸೂದನ್ ಅವರು ಆಗಮಿಸಿ, ಮಕ್ಕಳಿಗೆ ಉದ್ಬೋಧನ ಮಾಡಿ, ಮಾತನಾಡುತ್ತ, “ತಾಯಿ, ತಂದೆ ಮತ್ತು ಗುರುಗಳ ನುಡಿಗಳನ್ನು ಪಾಲಿಸುವುದು ಜೀವನದ ಮೂಲಭೂತ ಧರ್ಮವಾಗಿದೆ. ಪ್ರತಿಯೊಬ್ಬರೂ ದೇಶವನ್ನು ಪ್ರೀತಿಸಿ, ದೇಶಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕು. ವಿವೇಕಾನಂದರ ಆದರ್ಶಗಳು ನಮ್ಮ ಜೀವನಕ್ಕೆ ದಾರಿದೀಪವಾಗಬೇಕು” ಎಂದು ನುಡಿದರು. ಜಯಂತಿಯ ಅಂಗವಾಗಿ, ಶಾಲಾ ಮಕ್ಕಳಿಂದ ಭಾಷಣ, ಹಾಡು, ನೃತ್ಯ, ನಾಟಕಗಳು ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿದ್ದವು. ಇದರೊಂದಿಗೆ, ವಿವೇಕಾನಂದರ ಜೀವನ ಮತ್ತು ಸಾಧನೆಗಳ ಮೇಲೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು.