Dharwad, Apr. 7: Sri Ram Navami was celebrated herein Rashtrotthana Vidya Kendra – Sattur.School Correspondent Sri Gururaja Agadi offered prayers to the portrait of Lord Ram.School Music Teacher Sri Dinesh taught the Bhajan of Lord Ram and a mass Bhajan was performed. School Correspondent Gururaja Agadi said that it should be the goal of every Hindu to adopt the sacrifice and ideal qualities of Sri Ram in their lives. He said that we are all fortunate and virtuous, and it is our good fortune that the dream of rebuilding the Sri Ram temple in Ayodhya, which has been in existence for five hundred years, has come true in our time.Teacher Smt. Amrita explained the importance of celebrating Ram Navami, while Smt. Meeta recited a poem on Sri Ram. Finally, prasad was distributed.
ಧಾರವಾಡ, ಏ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ಶ್ರೀ ರಾಮ ನವಮಿ ಆಚರಿಸಲಾಯಿತು. ಶಾಲೆಯ ಕರೆಸ್ಪಾಂಡೆಂಟ್ ಶ್ರೀ ಗುರುರಾಜ ಅಗಡಿ ರಾಮನ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.ಶಾಲೆಯ ಸಂಗೀತ ಶಿಕ್ಷಕ ಶ್ರೀ ದಿನೇಶ್ ಅವರು ರಾಮನ ಭಜನೆಯನ್ನು ಹೇಳಿಕೊಡುವುದರ ಮೂಲಕ ಸಾಮೂಹಿಕ ಭಜನೆಯನ್ನು ಮಾಡಲಾಯಿತು. ಶಾಲೆಯ ಕರೆಸ್ಪಾಂಡೆಂಟ್ ಗುರುರಾಜ ಅಗಡಿ ಅವರು, ಶ್ರೀ ರಾಮನ ತ್ಯಾಗ ಹಾಗೂ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದುದು ಪ್ರತಿಯೊಬ್ಬ ಹಿಂದೂವಿನ ಗುರಿಯಾಗಬೇಕೆಂದು ತಿಳಿಸಿದರು. ನಾವೆಲ್ಲರೂ ಭಾಗ್ಯಶಾಲಿಗಳು ಮತ್ತು ಪುಣ್ಯವಂತರಾಗಿದ್ದು, ಐದು ನೂರು ವರ್ಷಗಳಿಂದಲೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪುನರ್ ನಿರ್ಮಾಣದ ಕನಸು ನಮ್ಮ ಕಾಲದಲ್ಲಿ ನನಸಾಗಿರುವುದು ನಮ್ಮೆಲ್ಲರ ಸೌಭಾಗ್ಯವೆಂದೇ ಹೇಳಿದರು. ಶಿಕ್ಷಕಿಯಾದ ಶ್ರೀಮತಿ ಅಮೃತ ಅವರು ರಾಮನವಮಿ ಹಬ್ಬದ ಆಚರಣೆಯ ಮಹತ್ವ ತಿಳಿಸಿದರೆ, ಶ್ರೀ ರಾಮನ ಕುರಿತ ಕವಿತೆಯನ್ನು ಶ್ರೀಮತಿ ಮೀತಾ ವಾಚಿಸಿದರು. ಕೊನೆಯದಾಗಿ ಪ್ರಸಾದವನ್ನು ವಿತರಿಸಲಾಯಿತು.