Dharwad, Jan. 15: Makar Sankranti festival was celebrated herein Rashtrotthana Vidya Kendra – Sattur. At the beginning of the program, teacher Smt. Sumathi gave a lecture to the children on the historical and scientific background of Sankranti festival. The children performed songs celebrating the harvest and a play on the significance of the Sankranti festival. The festival of Sankranti was celebrated following the tradition of throwing fruits on the heads of children. All the children celebrated the harvest festival with joy and gaiety by flying kites.
ಧಾರವಾಡ, ಜ. 15: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಸತ್ತೂರಿನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕಿ ಶ್ರೀಮತಿ ಸುಮತಿ ಅವರು ಸಂಕ್ರಾಂತಿ ಹಬ್ಬದ ಐತಿಹಾಸಿಕ ಹಾಗೂ ವೈಜ್ಞಾನಿಕ ಹಿನ್ನೆಲೆ ಕುರಿತು ಮಕ್ಕಳಿಗೆ ಉಪನ್ಯಾಸ ನೀಡಿದರು. ಮಕ್ಕಳು ಸುಗ್ಗಿ ಸಂಭ್ರಮದ ಹಾಡುಗಳು ಮತ್ತು ಸಂಕ್ರಾಂತಿ ಹಬ್ಬದ ಮಹತ್ವವನ್ನು ಒಳಗೊಂಡ ನಾಟಕ ಪ್ರದರ್ಶಿಸಿದರು. ಚಿಕ್ಕಮಕ್ಕಳಿಗೆ ಹಣ್ಣುಗಳನ್ನು ತಲೆ ಮೇಲೆ ಎರೆಯುವ ಸಂಪ್ರದಾಯ ಅನುಸರಿಸಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಎಲ್ಲ ಮಕ್ಕಳೂ ಗಾಳಿಪಟ ಹಾರಿಸುವ ಮೂಲಕ ಸುಗ್ಗಿ ಹಬ್ಬವನ್ನು ಸಂತೋಷದಿಂದ ಮತ್ತು ಉಲ್ಲಾಸದಿಂದ ಆಚರಿಸಿದರು.