ಶಿವರಾತ್ರಿ ಹಬ್ಬದ ಸಂಭ್ರಮ, ರಾಷ್ಟ್ರೋತ್ಥಾನದಲ್ಲಿ ನವಚೇತನ ವೈಭವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸತ್ತೂರಿನಲ್ಲಿ ದಿನಾಂಕ 25/02/2025 ರಂದು ಮಹಾಶಿವರಾತ್ರಿ ಹಬ್ಬವನ್ನು ಅತ್ಯಂತ ವಿಜ್ರಂಭಣೆಯಿಂದ ಮತ್ತು ಭಕ್ತಿಭಾವದಿಂದ ಆಚರಿಸಲಾಯಿತು. ಈಹಬ್ಬದಪ್ರಯುಕ್ತ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮೊದಲನೆಯದಾಗಿ ಶಿವಲಿಂಗವನ್ನು ಪೂಜಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಶಿವಲಿಂಗದ ಪೂಜೆಯನಂತರ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳಿಂದ ಶಿವತಾಂಡವನೃತ್ಯವನ್ನು ಪ್ರದರ್ಶಿಸಲಾಯಿತು, ಜೊತೆಗೆ ಲಿಂಗಾಷ್ಟಕಂ ಪಠಣ ಮತ್ತು ಶಿವನ ಮಹಿಮೆಯ ಕುರಿತು ವಿದ್ಯಾರ್ಥಿಗಳು ಭಾಷಣಗಳನ್ನು ಮಾಡಿದರು. ಈ ಭಾಷಣಗಳಲ್ಲಿ ಶಿವನ ಶಕ್ತಿಯ ಮಹತ್ವವನ್ನು ಹಾಗೂ ಶಿವರಾತ್ರಿ ಹಬ್ಬದ ವಿಶೇಷತೆಯನ್ನು ಹಂಚಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಕರೆಸ್ಪಾಂಡೆಂಟ್ಶ್ರೀ ಗುರುರಾಜ್ಅಗಡಿಜಿ, ಶಿಕ್ಷಕರು, ಪಾಲಕರು ಮತ್ತು ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಈ ಪವಿತ್ರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ವಿದ್ಯಾರ್ಥಿ ಕುಮಾರ್ದೈವಿಕ್ಕಾರ್ಯಕ್ರಮವನ್ನು ನಿರೂಪಿಸಿದನು, ಮತ್ತು ಮಯೂರ್ವಂದಿಸಿದನು. ಈ ಹಬ್ಬವು ಸರ್ವರಿಗೂ ಧಾರ್ಮಿಕ ಜ್ಞಾನವನ್ನು ಮತ್ತು ಸಾಂಸ್ಕೃತಿಕ ಮನೋಭಾವನೆಗಳನ್ನು ಮೂಡಿಸಿತು.