Dharwad, Nov. 29: Annual Sports Day was celebrated herein Rashtrotthana Vidya Kendra – Sattur. Smt. Anita Nimbargi graced the program. The Chief Guest preached about the importance of sports and its effects on health and personality development. She appreciated the positive and dedicated work of the school. School Correspondent Sri Gururaj Agadi guided the children on how to develop life values through sports, saying that winning and losing are an integral part of sports. An attractive parade was organized by the children of the four groups of the school, namely Lava, Kush, Dhruva, and Prahlad. Later, many individual and group level sports competitions were held. In the final result of all the competitions, Dhruva group won the champion title. A special running competition was organized for the teachers. At the closing ceremony, the Principal Dr. Anita encouraged the losing children and congratulated the winning children.
ಧಾರವಾಡ, ನ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ವಾರ್ಷಿಕ ಕ್ರೀಡಾ ದಿವಸವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಶ್ರೀಮತಿ ಅನಿತಾ ನಿಂಬರಗಿಯವರು ಆಗಮಿಸಿದ್ದರು. ಮುಖ್ಯ ಅತಿಥಿಗಳು ಕ್ರೀಡೆಯ ಮಹತ್ತ್ವ ಮತ್ತು ಅದರ ಆರೋಗ್ಯದ ಹಾಗೂ ವ್ಯಕ್ತಿತ್ವ ವಿಕಾಸದ ಪ್ರಭಾವಗಳ ಬಗ್ಗೆ ಉಪದೇಶ ನೀಡಿದರು. ಅವರು ಶಾಲೆಯ ಸಂಸ್ಕಾರಾತ್ಮಕ ಹಾಗೂ ಶ್ರದ್ಧೆಯ ಕಾರ್ಯಗಳನ್ನು ಶ್ಲಾಘಿಸಿದರು. ಶಾಲೆಯ ಕರೆಸ್ಪಾಂಡೆಂಟ್ ಶ್ರೀ ಗುರುರಾಜ್ ಅಗಡಿಯವರು, ಸೋಲು-ಗೆಲುವು ಕ್ರೀಡೆಯ ಅವಿಭಾಜ್ಯ ಅಂಗವಾಗಿದ್ದು, ಕ್ರೀಡೆಯ ಮೂಲಕ ಬಾಳಿಗೆ ಮೌಲ್ಯಗಳನ್ನು ಹೇಗೆ ಅಭಿವೃದ್ಧಿ ಪಡಿಸಿಕೊಳ್ಳಬಹುದು ಎಂಬ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಶಾಲೆಯ ನಾಲ್ಕು ಗುಂಪುಗಳಾದ ಲವ, ಕುಶ, ಧ್ರುವ, ಪ್ರಹ್ಲಾದ ಗುಂಪಿನ ಮಕ್ಕಳಿಂದ ಆಕರ್ಷಕ ಪರೇಡ್ ಆಯೋಜಿಸಲಾಗಿತ್ತು. ನಂತರ ವೈಯಕ್ತಿಕ ಹಾಗೂ ಗುಂಪು ಮಟ್ಟದ ಹಲವು ಕ್ರೀಡಾ ಸ್ಪರ್ಧೆಗಳು ನಡೆದವು. ಎಲ್ಲಾ ಸ್ಪರ್ಧೆಗಳ ಅಂತಿಮ ಫಲಿತಾಂಶದಲ್ಲಿ ಧ್ರುವ ಗುಂಪು ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದಿತು. ಬೋಧಕ ವರ್ಗದವರಿಗಾಗಿ ವಿಶೇಷ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಪ್ರಧಾನಾಚಾರ್ಯರಾದ ಡಾ. ಅನಿತಾ ಅವರು ಸೋತ ಮಕ್ಕಳಿಗೆ ಧೈರ್ಯ ತುಂಬಿ, ವಿಜೇತ ಮಕ್ಕಳನ್ನು ಅಭಿನಂದಿಸಿದರು.