Rathasaptami, Sharada Puja and Grandparents Namana in RVK – Sattur

Home > News & Events >Rathasaptami, Sharada Puja and Grandparents Namana in RVK – Sattur

Dharwad, Feb. 4: Rathasaptami, Sharada Puja and Grandparents Namana was organized herein Rashtrotthana Vidya Kendra – Sattur. Rathasaptami week was concluded by performing Surya Namaskar for all classes. Sharada Puja was held to worship Goddess Saraswati. To pay tribute to the grandparents of Gokulam children, ‘Grandparents’ Namana’ was celebrated with enthusiasm under the title “Salute to the Greatness of Our Lives”. Old games were organized for grandparents. Special prizes were distributed and honoured to the winners. Grandparents, sharing their impressions, expressed their appreciation that “Rashtrotthana Vidya Kendra is a school that imparts good morals and culture to children and is doing a great job of brightening the future of children.” Speaking at the program, School Correspondent Sri Gururaj Agadi said, “The enthusiasm of elders is an inspiration for the development of culture in children. Such programs take the culture education of the school to a higher level.” Principal Dr. Anita Rai said, “For the future of children to be bright, the experience of elders and their blessings are invaluable. Realizing the importance of instilling values ​​in children, the school will conduct such programs continuously.” In this program, children did Padapuja of their grandparents and received their blessings.

ಧಾರವಾಡ, ಫೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ ರಥಸಪ್ತಮಿ, ಶಾರದಾ ಪೂಜೆ ಮತ್ತು ಹಿರಿಯರಿಗೆ ನಮನ ಕಾರ್ಯಕ್ರಮಗಳು ನಡೆಸಲಾಯಿತು. ಎಲ್ಲ ತರಗತಿಗಳಿಗೂ ಸೂರ್ಯ ನಮಸ್ಕಾರ ಮಾಡಿಸುವುದರ ಮೂಲಕ ರಥಸಪ್ತಮಿ ಸಪ್ತಾಹವನ್ನು ಮುಕ್ತಾಯಗೊಳಿಸಲಾಯಿತು. ವಿದ್ಯಾದೇವತೆ ಸರಸ್ವತಿ ದೇವಿಯನ್ನು ಆರಾಧಿಸುವ ಶಾರದಾ ಪೂಜೆ ಹಮ್ಮಿಕೊಳ್ಳಲಾಗಿತ್ತು. ಗೋಕುಲಂ ಮಕ್ಕಳ ಅಜ್ಜ-ಅಜ್ಜಿಯರಿಗೆ ಗೌರವ ಸಲ್ಲಿಸುವುದಕ್ಕಾಗಿ “ನಮ್ಮ ಜೀವನದ ಹಿರಿಮೆಗೆ ನಮನ” ಎಂಬ ಶೀರ್ಷಿಕೆಯಡಿ “ಅಜ್ಜ-ಅಜ್ಜಿಯರ ದಿನ” ಎಂದು ಸಂಭ್ರಮದಿಂದ ಆಚರಿಸಲಾಯಿತು. ಅಜ್ಜ-ಅಜ್ಜಿಯರಿಗಾಗಿ ಹಳೆಯ ಆಟಗಳನ್ನು ಆಯೋಜಿಸಲಾಯಿತು. ವಿಜೇತರಾದವರಿಗೆ ವಿಶೇಷ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.  ಅಜ್ಜ-ಅಜ್ಜಿಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, “ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ನೀಡುವ ಪಾಠಶಾಲೆಯಾಗಿದ್ದು, ಮಕ್ಕಳ ಭವಿಷ್ಯವನ್ನು ಬೆಳಗಿಸುವ ಮಹತ್ತರ ಕೆಲಸ ಮಾಡುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಕರೆಸ್ಪಾಂಡೆಂಟ್ ಶ್ರೀ ಗುರುರಾಜ್ ಅಗಡಿ ಮಾತನಾಡುತ್ತಾ, “ಹಿರಿಯರ ಉತ್ಸಾಹ ಮಕ್ಕಳಲ್ಲಿ ಸಂಸ್ಕಾರದ ಬೆಳವಣಿಗೆಗೆ ಪ್ರೇರಣೆ. ಇಂತಹ ಕಾರ್ಯಕ್ರಮಗಳು ಶಾಲೆಯ ಸಂಸ್ಕಾರ ಶಿಕ್ಷಣವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ” ಎಂದು ನುಡಿದರು. ಪ್ರಧಾನಾಚಾರ್ಯರಾದ ಡಾ. ಅನಿತಾ ರೈ ಮಾತನಾಡಿ, “ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ, ಹಿರಿಯರ ಅನುಭವ ಮತ್ತು ಅವರ ಆಶೀರ್ವಾದ ಅಮೂಲ್ಯ. ಮಕ್ಕಳಲ್ಲಿ ಸನ್ಮೌಲ್ಯ ವೃದ್ಧಿಯ ಮಹತ್ವವನ್ನು ಅರಿತು, ಇಂತಹ ಕಾರ್ಯಕ್ರಮಗಳನ್ನು ಶಾಲೆ ನಿರಂತರವಾಗಿ ನಡೆಸಲಿದೆ” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಅಜ್ಜ-ಅಜ್ಜಿಯರಿಗೆ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

Scroll to Top