Rashtrotsava Celebration in RVK – Sattur

Dharwad, Jan. 4: Rashtrotthana Vidya Kendra- Sattur organized a Rashtrothsava program with the title “Pancha Parivarthaneya Patha”. Director of IIT Dharwad, Dr. Venkappaiah Desai graced the program. The chief guest shed light on the importance of mother tongue among children, emphasized the need to teach children to read and write in pure mother tongue and said that “adequate knowledge of mother tongue plays an important role in the moral and mental development of children”. Rashtrotthana CBSE Schools Administrative Head and Davangere School Secretary Sri. Jayanna in his orientation speech explained the goal of Rashtrotthana Parishad: “Building a healthy and sustainable society is our most important goal to contribute cultured children to the society and many students of Rashtrotthana have joined IIT colleges. He said that it is giving well-mannered children as a national contribution to the society.
Cultural Programs: As a special attraction of the programme, the children performed different cultural programs based on the path of Pancha Parivarthane such as Bharatnatyam, Yakshagana, dances and dramas of different states. School Principal Dr. Anita Rai presided over the reading of annual report, school achievement and progress was presented and children were awarded Pratibha Puraskara.

ಧಾರವಾಡ, ಜ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ- ಸತ್ತೂರಿನಲ್ಲಿ “ಪಂಚ ಪರಿವರ್ತನೆಯ ಪಥ” ಶೀರ್ಷಿಕೆಯೊಂದಿಗೆ ರಾಷ್ಟ್ರೋತ್ಸವ ಕಾರ್ಯಕ್ರಮವನ್ನು ಜರುಗಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಐಐಟಿ ಧಾರವಾಡದ ನಿರ್ದೇಶಕರಾದ ಡಾ. ವೆಂಕಪ್ಪಯ್ಯ ದೇಸಾಯಿ ಅವರು ಆಗಮಿಸಿದ್ದರು. ಮುಖ್ಯ ಅತಿಥಿಗಳು ಮಕ್ಕಳಲ್ಲಿ ಮಾತೃಭಾಷೆ ಪ್ರಾಮುಖ್ಯತೆಯ ಬಗ್ಗೆ ಬೆಳಕು ಚೆಲ್ಲಿ, ಮಕ್ಕಳಿಗೆ ಶುದ್ಧ ಮಾತೃಭಾಷೆಯ ಓದು ಮತ್ತು ಬರವಣಿಗೆ ಕಲಿಸುವ ಅಗತ್ಯತೆಯನ್ನು ಒತ್ತಿಹೇಳಿ, “ಮಾತೃಭಾಷೆಯ ಸಮರ್ಪಕ ಜ್ಞಾನವು ಮಕ್ಕಳ ನೈತಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಮಹತ್ತ್ವದ ಪಾತ್ರವನ್ನು ನಿಭಾಯಿಸುತ್ತದೆ” ಎಂದು ಹೇಳಿದರು. ರಾಷ್ಟ್ರೋತ್ಥಾನ ಸಿಬಿಎಸ್‌ಇ ಶಾಲೆಗಳ ಆಡಳಿತ ಮುಖ್ಯಸ್ಥರು ಮತ್ತು ದಾವಣಗೆರೆ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ಅವರು ತಮ್ಮ ಮಾರ್ಗದರ್ಶನ ಭಾಷಣದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಗುರಿಯನ್ನು ವಿವರಿಸಿದರು: “ಸಮಾಜದಲ್ಲಿ ಸ್ವಸ್ಥ-ಸುಸ್ಥಿರ ಸಮಾಜ ನಿರ್ಮಾಣ ಮಾಡುವುದು ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವುದು ನಮ್ಮ ಪ್ರಾಮುಖ್ಯತೆಯ ಗುರಿಯಾಗಿದ್ದು, ಮತ್ತು ರಾಷ್ಟ್ರೋತ್ಥಾನದಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಐಐಟಿ ಕಾಲೇಜಿಗೆ ಸೇರ್ಪಡೆಯಾಗಿದ್ದಾರೆ. ಉತ್ತಮ ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ರಾಷ್ಟ್ರೋತ್ಥಾನ ಕೊಡುಗೆಯಾಗಿ ನೀಡುತ್ತಿದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಮಕ್ಕಳು ಪಂಚ ಪರಿವರ್ತನೆಯ ಪಥವನ್ನು ಆಧರಿಸಿದ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭರತನಾಟ್ಯ, ಯಕ್ಷಗಾನ, ವಿವಿಧ ರಾಜ್ಯಗಳ ನೃತ್ಯಗಳು, ನಾಟಕಗಳನ್ನು ಪ್ರದರ್ಶಿಸಿದರು. ಶಾಲೆಯ ಪ್ರಧಾನಾಚಾರ್ಯೆ ಡಾ. ಅನಿತಾ ರೈ ಅವರ ನೇತೃತ್ವದಲ್ಲಿ ವಾರ್ಷಿಕ ವರದಿ ವಾಚನ ನಡೆಯಿತು, ಶಾಲೆಯ ಸಾಧನೆ ಮತ್ತು ಪ್ರಗತಿಯನ್ನು ಪ್ರಸ್ತುತಪಡಿಸಲಾಯಿತು ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Scroll to Top