76th Republic Day Celebration in RVK – Sattur

Home > News & Events >76th Republic Day Celebration in RVK – Sattur

Dharwad, Jan. 26: 76th Republic Day was celebrated herein Rashtrotthana Vidya Kendra – Sattur.Brigadier Sri Sudhindra Itnal, who was the Chief Guest at the program, said, “Everyone should be inspired to serve the country. Today, parents are hesitant to send their children to serve the country. However, it is very important to encourage children to join the army and serve the country for the bright future of the country.”School Correspondent Sri Gururaj Agadi in his presidential address called upon, “Everyone should play their role to build a bright future through a healthy society and sustainable development.” Students performed patriotic songs, drama, dance and speeches.

ಧಾರವಾಡ, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸತ್ತೂರಿನಲ್ಲಿ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬ್ರಿಗೇಡರ್ ಶ್ರೀ ಸುಧೀಂದ್ರ ಇಟ್ನಾಳ್ ಅವರು ಮಾತನಾಡುತ್ತಾ, “ಪ್ರತಿಯೊಬ್ಬರು ದೇಶಸೇವೆಗೆ ಪ್ರೇರಿತರಾಗಬೇಕು. ಇಂದು ಪೋಷಕರು ತಮ್ಮ ಮಕ್ಕಳನ್ನು ದೇಶಸೇವೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಆದರೆ, ದೇಶದ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳು ಸೇನೆ ಸೇರಲು ಮತ್ತು ದೇಶ ಸೇವೆ ಮಾಡಲು ಪ್ರೋತ್ಸಾಹ ನೀಡುವುದು ಅತಿ ಮುಖ್ಯವಾಗಿದೆ” ಎಂದು ಹೇಳಿದರು. ಶಾಲೆಯ ಕರೆಸ್ಪಾಂಡೆಂಟ್ ಶ್ರೀ ಗುರುರಾಜ್ ಅಗಡಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, “ಸ್ವಸ್ಥ ಸಮಾಜ ಮತ್ತು ಸುಸ್ಥಿರ ಅಭಿವೃದ್ಧಿ ಮೂಲಕ ಉಜ್ವಲ ಭವಿಷ್ಯ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ತಮ್ಮ ಪಾತ್ರ ನಿರ್ವಹಿಸಬೇಕು,” ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು, ನಾಟಕ, ನೃತ್ಯ ಮತ್ತು ಭಾಷಣಗಳನ್ನು ಪ್ರದರ್ಶಿಸಿದರು.

Scroll to Top